ಸಾಲಬಾದೆ ತಾಳಲಾರದೆ ರೈತ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ವಿಜಯಪುರ ಜಿಲ್ಲೆಯ ಆಲಮೇಲ ತಾಲೂಕಿನ ಬಗಲೂರು ಗ್ರಾಮದ ರೈತ ಭಾಗಣ್ಣ ಮಲ್ಲಪ್ಪ ಮಾದರ 52 ವರ್ಷದ ರೈತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಬ್ಯಾಂಕಿನಲ್ಲಿ 10 ಲಕ್ಷ ರೂಪಾಯಿ ಸಾಲ ಹಾಗೂ ಕೈ ಸಾಲ 5 ಲಕ್ಷ ರೂಪಾಯಿ ಸಾಲ ಮಾಡಿಕೊಂಡಿದ್ದ. ಜಮೀನಿನಲ್ಲಿ 4 ಎಕರೆ ಹತ್ತಿ ಬೆಳೆದಿದ್ದ ಆದರೆ ಭೀಮಾನದಿ ಪ್ರವಾಹದಿಂದ ಹತ್ತಿ ಬೆಳೆಯುವ ಸಂಪೂರ್ಣವಾಗಿ ಹಾಳಾಗಿದ್ದು. ರೈತ ಜಿಗುಪ್ಸೆಗೊಂಡು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.ಸ್ಥಳಕ್ಕೆ ಮಂಗಳವಾರ ಬೆಳಿಗ್ಗೆ 10ಗಂಟೆ ಸುಮಾರಿಗೆ ಆಲಮೇಲ ಪೊಲೀಸರು ಭೇಟಿ ನೀಡಿ ಪರಿಶೀಲನೆ.