ಈ ಬಾರಿಯ ಮೈಸೂರು ದಸರಾ ಉದ್ಗಾಟನೆ ವಿಚಾರಕ್ಕೆ ಸಂಬಂಧಿಸಿ, ಸೋಮವಾರ ಮಧ್ಯಾಹ್ನ 12:30 ರ ಸುಮಾರಿಗೆ ಶಿವಾನಂದ ಸರ್ಕಲ್ ಬಳಿ ಮಾಧ್ಯಮಗಳ ಜೊತೆ ಮಾತನಾಡಿದ ಮೈಸೂರು ಉಸ್ತುವಾರಿ ಸಚಿವ ಮಹದೇವಪ್ಪ ಅವರು, ಬಾನು ಮುಷ್ತಾಕ್ ಉದ್ಘಾಟನೆ ಮಾಡಿದ್ರೆ ಏನ್ ತಪ್ಪು ? ಕರಾವಳಿ ಭಾಗ ಸೇರಿ ಅನೇಕ ಕಡೆ ಮಸೀದಿ ಕೆಳಗೆ ದೇವಾಲಯ ಇದೆ. ಕೆಲವು ಕಡೆ ದೇವಾಲಯ ಕೆಳಗೆ ಮಸೀದಿ ಇರುತ್ತದೆ. ಯುಗಾದಿಗೆ ಹೋಳಿಗೆ ಊಟ ಮಾಡಿದ್ರೆ ಅವರು ನಮ್ಮ ಮನೆಗೆ ಬರ್ತಾರೆ. ಬಕ್ರೀದ್ ಮಾಡಿದ್ರೆ ನಾವು ಬಿರಿಯಾನಿ ತಿನ್ನೋಕೆ ಅವರ ಮನೆಗೆ ಹೋಗುತ್ತೇವೆ, ಅದರಲ್ಲಿ ಏನಿದೆ. ಯಾಕೆ ಅದರಲ್ಲಿ ಯಾಕೆ ತಾರತಮ್ಯ ಮಾಡ್ತೀರಾ..? ಎಂದರು.