ರಾಯಚೂರು ನಗರದ ಕೃಷ್ಣಗಿರಿ ಹಿಲ್ಸ್ ಬಳಿಯ ಬೆಟ್ಟದ ತಪ್ಪಲಿನಲ್ಲಿದ್ದ ಪಂಡದಲ್ಲಿ ಕೈ ತೊಳೆಯಲು ಹೋಗಿದ್ದ 15 ವರ್ಷದ ಬಾಲಕ ನೀರು ಪಾಲಾಗಿದ್ದ ಘಟನೆ ನಡೆದಿತ್ತು. ಶುಕ್ರವಾರ ಬೆಳಗ್ಗೆ ಈ ಘಟನೆ ನಡೆದು ಗೌತಮ್ ಎನ್ನುವ ಬಾಲಕ ನೀರಿನಲ್ಲಿ ಮುಳುಗಿದ್ದ ನಂತರ ಅಗ್ನಿಶಾಮಕ ದಳ ಶೋಧ ಕಾರ್ಯ ನಡೆಸಿ ಶುಕ್ರವಾರ ಸಂಜೆ ಬಾಲಕನ ಶವ ಪತ್ತೆಯಾಗಿದೆ. ಸತತ ಆರು ಗಂಟೆಗಳ ಕಾಲ ಶೋಧ ಕಾರ್ಯ ನಡೆಸಿ ಬಾಲಕನ ಶವ ಹೊರತೆಗೆದು ಕುಟುಂಬಸ್ಥರಿಗೆ ಹಸ್ತಾಂತರಿಸಿದ್ದಾರೆ. ಉಪಹಾರ ಸೇವಿಸಿ ಹೊಂಡದಲ್ಲಿ ಕೈ ತೊಳೆಯಲು ಹೋದಾಗ ಕಾಲುಜಾರಿ ನೀರಿನಲ್ಲಿ ಬಾಲಕ ಮುಳುಗಿದ್ದ ಎಂದು ತಿಳಿದುಬಂದಿದೆ. ಬಾಲಕನ ಶವ ಹೊರ ತೆಗೆಯುತ್ತಿದ್ದಂತೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.