ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರ ಕುಟುಂಬದ ಬಗ್ಗೆ ವಕೀಲ ಖಾದ್ರಿ ಹಗುರವಾಗಿ ಮಾತನಾಡಿರುವುದು ಸರಿಯಲ್ಲ. ರಾಜಕೀಯ ದ್ವೇಷ ಏನಿದ್ದರೂ ಸಹ ತಮ್ಮ ನಡುವೆ ಇರಬೇಕು ಹೊರತು ಕುಟುಂಬದ ಹೆಣ್ಣು ಮಕ್ಕಳ ಬಗ್ಗೆ ಹಗುರವಾಗಿ ಮಾತನಾಡಬಾರದು. ಹಿಂದೂ ಧರ್ಮದಲ್ಲಿ ಹೆಣ್ಣು ಮಕ್ಕಳಿಗೆ ತಮ್ಮದೇ ಆದ ವಿಶೇಷ ಸ್ಥಾನವಿದೆ ಆದರೆ ವಕೀಲ ಖಾದ್ರಿ ಯತ್ನಾಳ್ ಹೆಣ್ಣು ಮಕ್ಕಳ ಬಗ್ಗೆ ಮಾತನಾಡಿರುವುದು ಸರಿಯಲ್ಲ ಎಂದು ವಿಜಯಪುರದಲ್ಲಿ ಶುಕ್ರವಾರ ಸಾಯಂಕಾಲ 4ಗಂಟೆ ಸುಮಾರಿಗೆ ಪತ್ರಿಕಾಗೋಷ್ಠಿಯಲ್ಲಿ ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ ಶಾಸಕ ಯತ್ನಾಳ ಪರವಾಗಿ ಬ್ಯಾಟ್ ಬೀಸಿದರು.