ಭಾನುವಾರ ರಾತ್ರಿ ಸುಮಾರು 10.00 ಗಂಟೆಗೆ ಕಾರಟಗಿ- ಚಳ್ಳೂರು ಮಾರ್ಗವಾಗಿ ಗಂಗಾವತಿ ಕಡೆಗೆ ಅಕ್ರಮವಾಗಿ ಪಡಿತರ ಅಕ್ಕಿಯನ್ನು ಸಾಗಾಣಿಕೆ ಮಾಡುತ್ತಿದ್ದ ಆಟೋ ವಾಹನ ಸಂಖ್ಯೆ KA 26 6315 ಹಾಗೂ ಅಂದಾಜು 8.00 ಕ್ವಿಂಟಾಲ್ ಪಡಿತರ ಅಕ್ಕಿಯನ್ನು ಆಹಾರ ಇಲಾಖೆಯ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಅಗತ್ಯ ವಸ್ತುಗಳ ಕಾಯ್ದೆಯಡಿ, ಕಾರಟಗಿ ಪೊಲೀಸ್ ಠಾಣೆಯಲ್ಲಿ FIR ಸಂಖ್ಯೆ: 208/2025 ರ ಮೂಲಕ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗಿದೆ. ಎಂದು ಜುಲೈ 28 ರಂದು ಬೆಳಗ್ಗೆ 10-30 ಗಂಟೆಗೆ ಮಾಧ್ಯಮಕ್ಕೆ ಮಾಹಿತಿ ಲಬ್ಯವಾಗಿದೆ