ಕಲಬುರಗಿ : ಜಾತಿ ಸಮೀಕ್ಷೆಯಲ್ಲಿ ಹಿಂದೂ ಒಳಪಂಗಡದಲ್ಲಿ ಕ್ರಿಶ್ಚಿಯನ್ ಹೆಸರು ನಮೂದಿಸಿರೋದಕ್ಕೆ ಆಂದೋಲ ಕರುಣೇಶ್ವರ ಮಠದ ಪೀಠಾಧಿಪತಿ ಶ್ರೀ ಸಿದ್ದಲಿಂಗ ಸ್ವಾಮೀಜಿ ಕಿಡಿಕಾರಿದ್ದಾರೆ.. ಈ ಬಗ್ಗೆ ಸೆ8 ರಂದು ಮಧ್ಯಾನ 1 ಗಂಟೆಗೆ ಕಲಬುರಗಿಯಲ್ಲಿ 20 ಕ್ಕೂ ಅಧಿಕ ಮಠಾಧೀಶರಿಂದ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಈ ಸರ್ಕಾರ ಅಭಿವೃದ್ಧಿಯಲ್ಲಿ ಶೂನ್ಯ ಜಾತಿ-ಧರ್ಮಗಳ ಮಧ್ಯೆ ಜಗಳ ಹಚ್ಚುವುದರಲ್ಲಿ ಎತ್ತಿದ ಕೈ, ಹಿಂದೂ ಸಮಾಜ ಒಕ್ಕಲೆಬ್ಬಿಸಿ ಐಕ್ಯತೆಯ ಶವಪೆಟ್ಟಿಗೆಗೆ ಕೊನೆ ಮೊಳೆ ಜಡಿಯುವ ಕೆಲಸ ಈ ಸರ್ಕಾರ ಮಾಡ್ತಿದೆ ಅಂತಾ ಸಿದ್ದಲಿಂಗ ಸ್ವಾಮೀಜಿ ಆಕ್ರೋಶ ವ್ಯಕ್ತಪಡಿಸಿದರು