ಇತ್ತೀಚೆಗೆ ಸುರಿದ ಮಳೆ ಹಾಗೂ ಬಿರಿಗಾಳಿಗೆ ನಗರದ ಕುವೆಂಪು ಪಾರ್ಕ್ ನಲ್ಲಿ ದೊಡ್ಡ ಮರವೊಂದು ಉರುಳಿದೆ. ಬುಧವಾರ ಸಂಜೆ 5 ಗಂಟೆ ಸಮಯದಲ್ಲಿ ಬೆಳಕಿಗೆ ಬಂದಿದೆ. ಸಾರ್ವಜನಿಕರು ವಾಕಿಂಗ್ ಮಾಡುವ ವೇಳೆ ಪಾರ್ಕ್ ಮಧ್ಯ ಭಾಗದಲ್ಲಿದ್ದ ಮರವೊಂದು ಉರಳಿ ಬಿದ್ದಿದ್ದು ಯಾರಿಗೂ ಯಾವುದೇ ತೊಂದರೆಯಾಗಿಲ್ಲ. ನಗರಸಭೆ ಅಧಿಕಾರಿಗಳ ನಿರ್ಲಕ್ಷ್ಯ ದಿಂದ ಪಾರ್ಕ್ ನಲ್ಲಿ ಸರಿಯಾದ ನಿರ್ವಹಣೆ ಇಲ್ಲ. ಇತ್ತೀಚೆಗೆ ಪಾರ್ಕ್ ಒಳಗೆ ಹೋಗಲು ಸಾರ್ವಜನಿಕರು ಭಯ ಪಡುವಂತಾಗಿದೆ. ನೆಲಕ್ಕೆ ಉರಳಿದ ಮರವನ್ನು ತೆರವು ಗೊಳಿಸುವಂತೆ ಸ್ಥಳೀಯರು ನಗರಸಭೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು.