ಸುರಪುರ ನಗರದ ತಹಸಿಲ್ ರಸ್ತೆಯಲ್ಲಿನ ದೇವತೀರ್ಥ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರ್ಯ ವಿಶ್ವವಿದ್ಯಾಲಯ ಸಮಾಜ ಸೇವಾ ಪ್ರಭ ವತಿಯಿಂದ ರಾಜ್ಯಯೋಗಿನಿ ಪ್ರಕಾಶ ಮಣಿಜಿಯವರ ಪುಣ್ಯಸ್ಮರಣೆ ಹಾಗೂ ವಿಶ್ವ ಬಂದು ರಕ್ತದಾನ ಶಿಬಿರ ನಡೆಸಲಾಯಿತು. ಶನಿವಾರ ಮಧ್ಯಾಹ್ನದವರೆಗೆ ರಕ್ತದಾನ ಶಿಬಿರವನ್ನು ನಡೆಸಲಾಯಿತು, ಯಾದಗಿರಿಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಜಿಲ್ಲಾ ಆಸ್ಪತ್ರೆ ಸಿಬ್ಬಂದಿಗಳು ಆಗಮಿಸಿ, ರಕ್ತ ಸಂಗ್ರಹಣೆ ಮಾಡಿಕೊಂಡರು. ಈ ಸಂದರ್ಭದಲ್ಲಿ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿಯ ವಿಶ್ವವಿದ್ಯಾಲಯದ ರಾಗಿಣಿ ಅಕ್ಕ ಸೇರಿದಂತೆ ಅನೇಕರು ಭಾಗವಹಿಸಿದ್ದರು.