ಕೋಲಾರ ಜಿಲ್ಲೆಯ ಸುಧಾರ ಎಂಬುವವರಿಗೆ ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನ ಕೋಮರನಹಳ್ಳಿ ಕೆರೆಯ ಬಳಿ ಆರೋಪಿಯು ಭೂಮಿಯನ್ನು ಉಳುಮೆ ಮಾಡುವಾಗ ಪುರಾತನ ಕಾಲದ ಬಂಗಾರದ ಬಿಲ್ಲೆಗಳು ಸಿಕ್ಕಿರುತ್ತವೆ ಅವುಗಳನ್ನು ಕಡಿಮೆ ಬೆಲೆಗೆ ಮಾರಾಟ ಮಾಡುವುದಾಗಿ ನಂಬಿಸಿ 80 ಲಕ್ಷ ರೂ ವಂಚನೆ ಮಾಡಲಾಗಿತ್ತು. ಈ ಸಂಬಂಧ ಹರಿಹರ ತಾಲ್ಲೂಕಿನ ಮಲೇಬೆನ್ನೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ನಕಲಿ ಬಂಗಾರ ನೀಡಿ ವಂಚಿಸಿದ್ದ ಶಿವಮೊಗ್ಗ ತಾಲ್ಲೂಕಿನ ಲಕ್ಷ್ಮಪ್ಪ ಎಂಬ ಆರೋಪಿಯನ್ನು ಮಲೇಬೆನ್ನೂರು ಠಾಣಾ ಪೊಲೀಸರು ಬಂಧಿಸಿದ್ದು 5.50 ಲಕ್ಷ ರೂಗಳನ್ನು ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.