ತಮಿಳುನಾಡಿಗೆ ಅಗತ್ಯಕ್ಕಿಂತ ಹೆಚ್ಚಾಗಿ ಕಾವೇರಿ ನೀರನ್ನು ಹರಿಸಲಾಗಿದೆ ಎಂದು ಶಿರಾ ವಿಧಾನಸಭಾ ಕ್ಷೇತ್ರದ ಶಾಸಕ ಟಿ. ಬಿ. ಜಯಚಂದ್ರ ಹೇಳಿದರು. ಹೇಮಾವತಿ ನೀರಿನಿಂದ ಭರ್ತಿಯಾದ ಶಿರಾ ವಿಧಾನಸಭಾ ಕ್ಷೇತ್ರದ ಕಳ್ಳಂಬೆಳ್ಳ ಕೆರೆಗೆ ಶಾಸಕ ಟಿ. ಬಿ. ಜಯಚಂದ್ರ ಗಂಗಾ ಪೂಜೆ ನೆರವೇರಿಸಿದ ಬಳಿಕ 11 ಕೆರೆಗಳಿಗೆ ನೀರು ಹರಿಸುವ ಕಾರ್ಯಕ್ಕೆ ಚಾಲನೆ ನೀಡಿ ಬಳಿಕ ಅವರು ಮಾತನಾಡಿದರು ಸೋಮವಾರ ಮಧ್ಯಾಹ್ನ ಸುಮಾರು 1 ರ ಸಮಯದಲ್ಲಿ ಅವರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದರು. ತಮಿಳುನಾಡಿಗೆ ಕರ್ನಾಟಕ ದಿಂದ 177.25 ಟಿ ಎಂ ಸಿ ನೀರು ಹರಿಸಬೇಕಿದೆ ಹೀಗಾಗ್ಲೇ 195 ಟಿ ಎಂ ಸಿ ನೀರನ್ನ ತಮಿಳುನಾಡಿಗೆ ಹರಿಸಲಾಗಿದೆ. ಈ ಹಿನ್ನಲೆ ಇನ್ನು ಮಳೆಗಾಲವಿದ್ದು. ಕುಣಿಗಲ್ ಸೇರಿದಂತೆ ಮಾಗಡಿಗೂ ಹೇಮಾವತಿ ನೀರು ಹರಿಸಲು ಸಾಧ್ಯವಿದೆ ಎಂದರು.