ಮಳೆ ಹಾಗೂ ಬೆಳೆ ಸಮಥದ್ಧವಾಗಿ, ಮನುಕುಲಕ್ಕೆ ಒಳಿತಾಗಲಿ, ರೈತತ ಜಮೀನಲ್ಲಿ ಉತ್ತಮ ಬೆಳೆ ಬೆಳೆದು ನಾಡು ಸಮೃದ್ಧವಾಗಲಿ ಅಂತಾ ಬಯಲುಸೀಮೆ ಭಾಗದಲ್ಲಿ ಜೋಕುಮಾರಸ್ವಾಮಿ ಪೂಜೆಯ ಆಚರಣೆಅಡಲಾಗುತ್ತೆ. ಮಧ್ಯ ಕರ್ನಾಟಕದಲ್ಲಿ ಗಣೇಶ ಹಬ್ಬ ಮೂರನೆ ದಿನದ ಈ ಜೋಕುಮಾರಸ್ವಾಮಿಯನ್ನು ಬುಟ್ಟಿಯಲ್ಲಿ ಹಾಕಿಕೊಂಡು ಗಂಗಾ ಮತಸ್ಥರು ಜನರ ಮನೆ ಮನೆಗೆ ಕರೆದೊಯ್ದು ವಿಶೇಷ ಪೂಜೆ ಸಲ್ಲಿಸಿ ಪ್ರಾರ್ಥನೆ ಮಾಡ್ತಾರೆ. ಗೌರಸಮುದ್ರ ಮಾರಮ್ಮ ಜಾತ್ರೆಯಲ್ಲಿ ಜೋಕುಮಾರ ಜನಿಸುತ್ತಾನೆ ಅಂತಾ ಜನರ ನಂಬಿಕೆ. ಜೋಕುಮಾರ ಗಂಗಾಮತಸ್ಥರ ಆರಾಧ್ಯ ದೈವ ವಾಗಿದ್ದು, ಗಂಗಾಮತಸ್ಥರ ಮಹಿಳೆಯರು ಸಿಂಗರಿಸಿದ ಬುಟ್ಟಿಯಲ್ಲಿ ಜನರ ಮನೆ, ಮನೆಗೆ ತೆರಳಿ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ.