ತಾಲೂಕಿನ ಕಟ್ಟಿತುಗಾಂವ ಬಳಿ ರೈಲು ಹಾಯ್ತು 40ಕ್ಕೂ ಅಧಿಕ ಕುರಿಗಳು ಮೃತಪಟ್ಟ ಹಿನ್ನೆಲೆಯಲ್ಲಿ ಬಡ ರೈತ ಗಾಬರಿಗೊಂಡಿದ್ದಾರೆ. ಉಪಜೀವನಕ್ಕೆ ಆಧಾರವಾಗಿದ್ದ ಕುರಿಗಳು ಮೃತಪಟ್ಟ ಕಾರಣ ಅವರಿಗೆ ಸಂಬಂಧಪಟ್ಟ ಇಲಾಖೆಯವರು ಗ್ರಾಮಕ್ಕೆ ಭೇಟಿ ನೀಡಿ ರಾಜಕುಮಾರ್ ಮೈತ್ರಿ ಅವರಿಗೆ ಧೈರ್ಯ ಹೇಳಿ, ₹5 ಲಕ್ಷ ಪರಿಹಾರ ಘೋಷಿಸಬೇಕು ಎಂದು ಕನ್ನಡ ಸೇನೆ ಕರ್ನಾಟಕ ಜಿಲ್ಲಾಧ್ಯಕ್ಷ ಸುಭಾಷ್ ಕೆನಾಡೆ ಆಗ್ರಹಿಸಿದರು.