ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲ್ಲೂಕಿನ ಆಂದ್ರ ಗಡಿಯಂಚಿನ ಮದ್ದಿಹಳ್ಳಿ ಗೊಲ್ಲರಹಟ್ಟಿ ಗ್ರಾಮದಲ್ಲಿ. ಹೌದು ಇದೇ ಗ್ರಾಮದ ಬೋರ್ ವೆಲ್ ಪಾಯಿಂಟ್ ಮಾಡ್ತಿದ್ದ ಬಾಲಣ್ಣ (52) ಪತ್ನಿ ಸಂಚಿಗೆ ಬಲಿಯಾಗಿದ್ದಾನೆ. ಕಳೆದ ಶನಿವಾರ ರಾತ್ರಿ 1 ಗಂಟೆ ವೇಳೆ ಊಟ ಮುಗಿಸಿ ಮನೆ ಮುಂಭಾಗ ಚಾಪೆ ಮೇಲೆ ಮಲಗಿದ್ದ. ಆದರೆ ಈತನ ಪತ್ನಿ ಮಮತ ಗಂಡನ ಕೊಲೆಗೆ ಮುಹೂರ್ತ ಇಟ್ಟಿದ್ಲು. ಪ್ರೀಯಕರ ಮೂರ್ತಿ ಜೊತೆ ಸೇರಿ ಕೊಲೆಗೆ ಸ್ಕೇಚ್ ಹಾಕಿದ್ಲು. ಇನ್ನೂ ಅದೇ ರಾತ್ರಿ ಮನೆ ಹಿಂಭಾಗದ ಅಡಿಕೆ ತೋಟದಲ್ಲಿ ಪ್ರೀಯಕರ ಮೂರ್ತಿ ಬಾಲಣ್ಣನ ಹತ್ಯೆಗೆ ಹೊಂಚು ಹಾಕಿ ಕುಳಿತಿದ್ದ. ಇತ್ತ ಗಾಢ ನಿದ್ರೆಗೆ ಬಾಲಣ್ಣ ಸರಿಯುತ್ತಿದ್ದಂತೆ ಏಕಾಏಕಿ ಕಬ್ಬಿಣದ ರಾಡ್ ನಿಂದ ಹೊಡೆದು ಕೊಲೆ ಮಾಡಿದ್ದ. ಇತ್ತ ಪತ್ನಿ ಮಮತ ಕೂಡಾ ಗಂಡನ ಕೊಲೆಗೆ ಸಾಥ್ ನೀಡಿದ್ಲು.