ರಾತ್ರಿ ವೇಳೆ ಕುಡುಕರನ್ನ ಪ್ರಶ್ನೆ ಮಾಡಿದ್ದೆ ತಪ್ಪಾಯ್ತಾ? ಖಾಕಿ ಮೇಲೆ ಕಾರು ಹತ್ತಿಸೋಕೆ ಮುಂದಾದ ಪುಂಡರು, ಗುರುವಾರ ತಡರಾತ್ರಿ 1:45 ರ ಸುಮಾರಿಗೆ ರಾಜಗೋಪಲನಗರ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ. ರಾಜಗೋಪಾಲ ನಗರ ಬಾಟಲ್ ಮಾರ್ಕ್ ಬಾರ್ ಮುಂದೆ ಸ್ಕಾರ್ಪಿಯೋ ಕಾರಿನಲ್ಲಿ ನಾಲ್ಕೈದು ಜನ ಎಣ್ಣೆ ಕುಡಿಯುತ್ತಿದ್ದು, ಸಬ್ ಇನ್ಸ್ಪೆಕ್ಟರ್ ಮುರಳಿ ನೈಟ್ ರೌಂಡ್ಸ್ ಮಾಡುತ್ತಿದ್ದರು. ಟಿಂಟ್ ಇರೋ ಸ್ಕಾರ್ಪಿಯೋ ಕಾರಿನಲ್ಲಿ ಯಾರಿದ್ದಾರೆ ಅಂತ ನೋಡಿದ್ದ ಪಿಎಸ್ಐ. ಈ ವೇಳೆ ಕೈ ನಲ್ಲಿದ್ದ ಎಣ್ಣೆ ಸಮೇತ ಪಿಎಸ್ಐ ಮೇಲೆ ಕಾರು ಹತ್ತಿಸಲು ಪುಂಡರು ಮುಂದಾಗಿದ್ದು, ಕಾರ್ ಹತ್ತಿಸಿ ರಿವರ್ಸ್ ತೆಗೆದಿದ್ದಾರೆ. ಪಿಎಸ್ ಐ ಕಾರ್ ನಿಲ್ಲಿಸವಂತೆ ಡೋರ್ ನ ಬಡಿದರು, ಏಕಾಏಕಿ ಕಾರನ್ನ ವೇಗವಾಗಿ ತಿರುಗಿಸಿಕೊಂಡು ಪರಾರಿಯಾಗಿದ್ದಾರೆ.