ನಾರಾಯಣಪುರ ಜಲಾಶಯದಿಂದ ಕೃಷ್ಣಾ ನದಿಗೆ 2.20 ಲಕ್ಷ ಕ್ಯೂಸೆಕ್ ನೀರು ನದಿಗೆ ಹರಿ ಬಿಡಲಾಗಿದ್ದು, ಕೃಷ್ಣಾ ನದಿ ಮೈತುಂಬಿ ಹರಿಯುತ್ತಿದೆ. ಈಗಾಗಲೇ ಶೀಲಹಳ್ಳಿ ಸೇತುವೆ ಹಾಗೂ ಕಾಡ್ಲೂರಿನಲ್ಲಿರುವ ಕೃಷ್ಣಾ ನದಿ ತೀರದ ಉಪೇಂದ್ರ ತೀರ್ಥ ಕರಾಚಿತ ಪ್ರಾಣ ದೇವರ ದೇಗುಲ ಸಂಪೂರ್ಣ ಮುಳುಗಡೆಯಾಗಿದೆ. ಬಸವ ಸಾಗರ ಜಲಾಶಯಕ್ಕೆ ಆಲಮಟ್ಟಿ ಡ್ಯಾಂನಿಂದ 2.10 ಲಕ್ಷ ಹಾಗೂ ಮಲಪ್ರಭ ನದಿಯಿಂದ 10 ಸಾವಿರ ಕ್ಯೂಸೆಕ್ ಸೇರಿ ಬರೋಬ್ಬರಿ 2.20 ಲಕ್ಷ ಕ್ಯೂಸೆಕ್ ನೀರು ಕೃಷ್ಣಾನದಿಗೆ ಹರಿದು ಬರುತ್ತಿದೆ ಎಂದು ಆಣೆಕಟ್ಟಿನ ಅಧಿಕಾರಿಗಳು ಆಗಸ್ಟ್ 23 ರ ಶನಿವಾರ ಮಧ್ಯಾಹ್ನ 12 ಗಂಟೆಗೆ ತಿಳಿಸಿದ್ದಾರೆ.