ದಾಂಡೇಲಿ : ದಾಂಡೇಲಿ - ಹಳಿಯಾಳ ರಾಜ್ಯ ಹೆದ್ದಾರಿಯಲ್ಲಿ ಬರುವ ಕರ್ಕಾ ಹತ್ತಿರ ರಸ್ತೆ ಬದಿಯಲ್ಲಿ ದಾಸ್ತನಿಟ್ಟಿದ್ದ ನೀರು ಸರಬರಾಜು ಮಾಡುವ ಪೈಪುಗಳ ರಾಶಿಗೆ ಕಾರೊಂದು ಗುದ್ದಿ, ಚಾಲಕನಿಗೆ ಗಾಯವಾದ ಘಟನೆ ಶುಕ್ರವಾರ ತಡರಾತ್ರಿ ಅಂದರೆ ಶನಿವಾರ ಒಂದು ಗಂಟೆ ಸುಮಾರಿಗೆ ನಡೆದಿದ್ದು, ಅದೇ ರಸ್ತೆಯಲ್ಲಿ ಬೆಳಗಾವಿಯಿಂದ ದಾಂಡೇಲಿಗೆ ಬರುತ್ತಿದ್ದ ಸಮಾಜಸೇವಕರು ಹಾಗೂ ಕಾಂಗ್ರೆಸ್ ಮುಖಂಡರಾದ ದಾದಾಪೀರ್ ನದೀಮುಲ್ಲಾ ಅವರು ತಕ್ಷಣವೇ ತಮ್ಮ ಕಾರನ್ನು ನಿಲ್ಲಿಸಿ, ಗಾಯಗೊಂಡಿದ್ದ ಕಾರಿನ ಚಾಲಕನನ್ನು ತಮ್ಮ ಕಾರಿನಲ್ಲಿ ದಾಂಡೇಲಿಯ ಸಾರ್ವಜನಿಕ ಆಸ್ಪತ್ರೆಗೆ ಕರೆತಂದು ಚಿಕಿತ್ಸೆಗೆ ದಾಖಲಿಸಿ ಮಾನವೀಯತೆಯನ್ನು ಮೆರೆದಿದ್ದಾರೆ.