ಕೇಂದ್ರ ಸರ್ಕಾರ ಮುಂಬರುವ ಸೆಪ್ಟೆಂಬರ್ ತಿಂಗಳಿನಿಂದ ನಡೆಸುವ ಜಾತಿಗಣತಿ ಸಂದರ್ಭದಲ್ಲಿ ಕುಂಚಿಟಿಗ ಜನಾಂಗದವರು ಜಾತಿ ಕಾಲಂನಲ್ಲಿ ಹಿಂದೂ ಕುಂಚಿಟಿಗ ಎಂಥಲೇ ನಮೂದಿಸಬೇಕು ಎಂದು ಅಖಿಲ ಕುಂಚಿಟಿಗ ಮಹಾಮಂಡಲದ ಅಧ್ಯಕ್ಷ ರಂಗ ಹನುಮಯ್ಯ ಹೇಳಿದರು. ಅವರು ಅಖಿಲ ಕುಂಚಿಟಿಗ ಮಹಾಮಂಡಲ ಹಾಗೂ ತುಮಕೂರು ಜಿಲ್ಲಾ ಕುಂಚಿಟಿಗರ ವಿದ್ಯಾಭಿವೃದ್ಧಿ ಸಂಘದ ಸಹಯೋಗದಲ್ಲಿ ಸೆಪ್ಟೆಂಬರ್ 12 ರಂದು ನಗರದಲ್ಲಿ ರಾಜ್ಯ ಮಟ್ಟದ ಕುಂಚಿಟಿಗರ ಮಹಾ ಸಮ್ಮಿಲನ ಕಾರ್ಯಕ್ರಮ ನಡೆಯಲಿರುವ ಹಿನ್ನಲೆ ತುಮಕೂರು ನಗರದ ಕುಂಚಿಟಿಗ ಸಮುದಾಯ ಭವನದಲ್ಲಿ ಶುಕ್ರವಾರ 1.30 ಸಮಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಪೂರ್ವ ಭಾವಿ ಸಭೆ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು. ಈ ವೇಳೆ ಸಮಿತಿ ಪದಾಧಿಕಾರಿಗಳಾದ ದೊಡ್ಡ ಲಿಂಗಪ್ಪ ಇದ್ದರು.