ಜೋಯಿಡಾ : ತಾಲ್ಲೂಕಿನ ಗಣೇಶಗುಡಿಯಲ್ಲಿರುವ ಸೂಪಾ ಜಲಾಶಯದಲ್ಲಿ ಮಂಗಳವಾರದ ನೀರಿನ ಮಟ್ಟ 559.69 ಮೀ ನೀರು ಇದೆ ಎಂದು ಇಂದು ಗಣೇಶಗುಡಿ ಕೆಪಿಸಿ ಕಾರ್ಯಾಲಯದಿಂದ ಮಾಹಿತಿ ಲಭ್ಯವಾಗಿದೆ. 564 ಮೀಟರ್ ನೀರಿನ ಗರಿಷ್ಟ ಮಿತಿಯನ್ನು ಹೊಂದಿರುವ ಸೂಪಾ ಜಲಾಶಯದಲ್ಲಿ ಒಳ ಹರಿವು 6,440.77 ಕ್ಯೂಸೆಕ್ಸ್ ಮತ್ತು ಹೊರ ಹರಿವು 4,123.22 ಕ್ಯೂಸೆಕ್ಸ್ ಇದೆ ಎಂದು ಹಾಗೂ ಜಲಾನಯನ ಪ್ರದೇಶದಲ್ಲಿ ಕಳೆದ 24 ಗಂಟೆಯಲ್ಲಿ 6.8 ಮೀ ಮಿ ಮಳೆಯಾಗಿದೆ ಎಂದು ಇಂದು ಮಂಗಳವಾರ ಮಧ್ಯಾಹ್ನ 12.00 ಗಂಟೆ ಸುಮಾರಿಗೆ ಮಾಧ್ಯಮಕ್ಕೆ ಮಾಹಿತಿ ಲಭ್ಯವಾಗಿದೆ.