ವಿಧಾನಸೌಧದಲ್ಲಿ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಚಲುವರಾಯಸ್ವಾಮಿ ಅವರು ಮದ್ದೂರು ಗಣೇಶೋತ್ಸವ ವಿಚಾರವಾಗಿ, ಹಾಗೂ ಬಿಜೆಪಿ ಟೀಕೆಗಳಿಗೆ ಸಂಬಂಧಿಸಿ ಗುರುವಾರ ಮಧ್ಯಾಹ್ನ 3 ಗಂಟೆ ಸುಮಾರಿಗೆ ವಿಧಾನಸೌಧದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿ, ಯಾವುದೇ ಒಂದು ಸಮಾಜಕ್ಕೆ ಪದ ಹೋಲಿಕೆ ಮಾಡುವ ಪ್ರಶ್ನೆ ಬರಬಾರದು. ಈ ಸಂದೇಶವನ್ನು ನಾವು ಮದ್ದೂರಿನ ಘಟನೆ ಮೂಲಕ ಕೊಟ್ಟಿದ್ದೇವೆ. ಆ ನಂತರವೂ ಬಂದ್ ಮಾಡಿದ್ರು, ಸಾಮೂಹಿಕ ಗಣೇಶ ವಿಸರ್ಜನೆ ಮೆರವಣಿಗೆ ಮಾಡಿದ್ರು, ಬಿಜೆಪಿ ಜೆಡಿಎಸ್ ನಾಯಕರು ಬಾಯಿಗೆ ಬಂದಂತೆ ಮಾತಾಡಿದ್ದಾರೆ. ಅದು ಸಮಾಜದ ಶಾಂತಿ ಕದಡುವ, ವಾತವರಣ ಕಲುಷಿತ ಗೊಳಿಸೋಕಾ..? ಕೋಮು ಸಂಘರ್ಷ ಸೃಷ್ಟಿ ಮಾಡುವುದಾ ಅಂತಾ ಯೋಚಿಸಬೇಕು.