ಕಲಬುರಗಿ : ಸೇತುವೆ ಮೇಲಿಂದ ಜಿಗಿದು ನದಿಗೆ ಹಾರಿ ವ್ಯಕ್ತಿಯೊಬ್ಬರು ಆತ್ಮಹತ್ಯೆಗೆ ಶರಣಾದ ಘಟನೆ ಕಲಬುರಗಿ ಜಿಲ್ಲೆ ಶಹಬಾದ್ ಪಟ್ಟಣದ ಹೊರವಲಯದಲ್ಲಿರೋ ಕಾಗಿಣಾ ನದಿಯಲ್ಲಿ ಜು24 ರಂದು ಮಧ್ಯಾನ 1 ಗಂಟೆಗೆ ಸಂಭವಿಸಿದೆ.. ಶಹಬಾದ್ ಪಟ್ಟಣದ ನಿವಾಸಿ ಜಗದೀಶ್ ಸ್ವಾಮಿ (55) ಆತ್ಮಹತ್ಯೆಗೆ ಶರಣವಾದ ವ್ಯಕ್ತಿಯಾಗಿದ್ದಾರೆ.. ಇನ್ನೂ ಜಗದೀಶ್ ಸ್ವಾಮಿ ಅನಾರೋಗ್ಯದ ಹಿನ್ನಲೆಯಲ್ಲಿ ಶಹಬಾದ್-ವಾಡಿ ಮುಖ್ಯ ರಸ್ತೆಯ ಸೇತುವೆ ಮೇಲಿಂದ ಜಿಗಿದು ತುಂಬಿ ಹರಿಯುತ್ತಿರೋ ಕಾಗಿಣಾ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರೋ ಶಂಕೆ ವ್ಯಕ್ತವಾಗಿದೆ. ಇತ್ತ ಮೃತದೇಹಕ್ಕಾಗಿ ಅಗ್ನಿಶಾಮಕ ದಳ ಸಿಬ್ಬಂದಿಗಳು ಹುಡುಕಾಟ ನಡೆಸಿದ್ದು, ಶಹಬಾದ್ ಠಾಣೆ ಪೊಲೀಸರು ಘಟನ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ..