ಬಳ್ಳಾರಿಯಲ್ಲಿ ಮಳೆ ಸುರಿಯುವಾಗಲೆಲ್ಲಾ ಅಂಡರ್‌ಪಾಸ್‌ಗಳು ನೀರಿನಲ್ಲಿ ಮುಳುಗುವ ಸಮಸ್ಯೆ ಮತ್ತೆ ಮರುಕಳಿಸಿದೆ. ನಗರದ ವಿವಿಧ ಭಾಗಗಳಲ್ಲಿ ನಿರ್ಮಿಸಲಾದ ಅಂಡರ್‌ಪಾಸ್‌ಗಳು ಶಾಶ್ವತ ಪರಿಹಾರ ಕಾಣದೆ ಜನಜೀವನಕ್ಕೆ ತೊಂದರೆ ತಂದಿವೆ.ಸೆಪ್ಟಂಬರ್ 12, ಶುಕ್ರವಾರ ಬೆಳಿಗ್ಗೆ 8 ಗಂಟೆಗೆ ರಂಗಮಂದಿರದ ಬಳಿ ಇರುವ ರಬ್ಬ್ (RUB) ಈಗಾಗಲೇ ಮಳೆಯಿಂದಾಗಿ ನೀರಿನಲ್ಲಿ ಮುಳುಗಿದ್ದು, ಇದೀಗ ಎಸ್‌ಎನ್ ಪೇಟೆಯ ಅಂಡರ್‌ಪಾಸ್ ಕೂಡ ನೀರಿನಿಂದ ತುಂಬಿ ಹೋಗಿದೆ. ಇದರ ಪರಿಣಾಮವಾಗಿ ವಾಹನ ಸಂಚಾರ ಸಂಪೂರ್ಣವಾಗಿ ಸ್ಥಗಿತಗೊಂಡಿದ್ದು, ಸ್ಥಳೀಯರು ಪರ್ಯಾಯ ಮಾರ್ಗಗಳನ್ನು ಬಳಸುವ ಪರಿಸ್ಥಿತಿ ಎದುರಾಗಿದೆ.ಪ್ರತಿ ಬಾರಿ ಮಳೆ ಸುರಿದಾಗ ಇದೇ ಸಮಸ್ಯೆ ಮರುಕಳಿಸುತ್ತಿದೆ. ಬೃಹತ್ ಮೊತ್ತ ವೆಚ್ಚಮಾಡಿ ನಿರ್ಮಿಸಿದ ಈ ಅಂಡರ್‌ಪಾಸ್‌ಗಳಿಗೆ ಶ