ಮಲೆನಾಡಿನ ಅದ್ಭುತ ಹಾಗೂ ವಿಸ್ಮಯ ಎಂದೇ ಬಣ್ಣಿಸಲಾಗುವ ಬರೋಬ್ಬರಿ 12 ವರ್ಷಗಳಿಗೊಮ್ಮೆ ಗಿರಿ ಶೃಂಗಗಳಲ್ಲಿ ಅಲಂಕರಿಸುವ ಕುರವಂಜಿ ಹೂವು ಮತ್ತೆ ಮಲೆನಾಡಿನಲ್ಲಿ ಚಂದ್ರದ್ರೋಣ ಪರ್ವತ ಸಾಲಿನಲ್ಲಿ ಶೃಂಗಾರ ಮೂಡಿಸಿದೆ. ಅಪರೂಪ ಎನ್ನುವಂತೆ ಚಿಕ್ಕಮಗಳೂರು ತಾಲೂಕಿನ ಮುಳ್ಳಯ್ಯನಗಿರಿ ಪರ್ವತ ಶ್ರೇಣಿ ವ್ಯಾಪ್ತಿಗೆ ಹೊಂದಿಕೊಂಡಂತೆ ಇರುವ ತರೀಕೆರೆ ತಾಲೂಕಿನ ಕೆಮ್ಮಣ್ಣುಗುಂಡಿ ವ್ಯಾಪ್ತಿಯಲ್ಲಿ ಕಾಣಿಸಿಕೊಳ್ಳುವ ಗಿರಿಯಲ್ಲಿ ಕುರವಂಜಿ ಹೂವು ಕಾಣಿಸಿಕೊಂಡಿದ್ದು ಪ್ರವಾಸಿಗರಿಗೆ ಮುದ ನೀಡುತ್ತಿದೆ. ಅದರಲ್ಲೂ 12 ವರ್ಷಗಳಿಗೊಮ್ಮೆ ಅಪರೂಪಕ್ಕೆ ಒಮ್ಮೆ ಕಾಣಿಸಿಕೊಳ್ಳುವ ಈ ಹೂವು ತಿಳಿ ನೀಲಿ ಹಾಗೂ ವಿಶೇಷ ಬಣ್ಣ ಕಣ್ಣಿಗೆ ಮುದ ನೀಡುವ ಹೂವು ಇದಾಗಿದ್ದು, ನೋಡುಗರನ್ನ ಆಕರ್ಷಿಸಿದೆ. ದೇಶದ ಕೆಲವೇ ಸ್ಥಳಗಳಲ್ಲಿ ಕಾ