ದಾಂಡೇಲಿ : ಕುಳಗಿ ರಸ್ತೆಯಲ್ಲಿರುವ ಕಾಳಿ ನದಿಯ ಮೆಟ್ಟಿಲಲ್ಲಿದ್ದ ಗಣಪತಿ ಮೂರ್ತಿಗಳನ್ನು ಹರಿಯುವ ನೀರಿಗೆ ಮತ್ತು ಸಂಗ್ರಹವಾಗಿದ್ದ ತ್ಯಾಜ್ಯ ವಸ್ತುಗಳನ್ನು ನಗರದ ಅಟಲ್ ಅಭಿಮಾನಿ ಸಂಘಟನೆಯು ಭಾನುವಾರ ಸಂಜೆ 5:30 ಗಂಟೆ ಸುಮಾರಿಗೆ ವಿಲೇವಾರಿ ಮಾಡುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು. ಅಟಲ್ ಅಭಿಮಾನಿ ಸಂಘಟನೆಯ ಅಧ್ಯಕ್ಷರಾದ ವಿಷ್ಣು ನಾಯರ್, ಪ್ರಮುಖರಾದ ರವೀಂದ್ರ ಶಾ, ಎಸ್‌ಕೆ.ಹಿರೇಮಠ, ಮಹಮ್ಮದ್ ಅಲಿ, ಶಿವಾಜಿ ತೇಲಿ, ಇಸ್ಮಾಯಿಲ್ ಶೇಖ, ಶಂಕ್ರಯ್ಯ ಹಿರೇಮಠ, ಅಮ್ಜದ್ ಪಿರ್ಜಾದೆ, ಪರಶುರಾಮ ಮನ್ನವಡ್ಡರ ಹಾಗೂ ಸಂಘಟನೆಯ ಪ್ರಮುಖರು ಉಪಸ್ಥಿತರಿದ್ದರು.