ಗುಂಡ್ಲುಪೇಟೆ ಪಟ್ಟಣದ ಎಪಿಎಂಸಿ ಆವರಣದ ಮುಂದೆ ರಾಜ್ಯ ಅರಿಶಿನ ಬೆಳೆಗಾರರ ಒಕ್ಕೂಟ ಮತ್ತು ಸೂರ್ಯಕಾಂತಿ ಬೆಳೆಗಾರರು ಸೂರ್ಯಕಾಂತಿ ಖರೀದಿ ಕೇಂದ್ರ ತೆರೆಯುವಂತೆ ಒತ್ತಾಯಿಸಿ 2ನೇ ದಿನವಾದ ಶುಕ್ರವಾರವೂ ಧರಣಿ ನಡೆಸಿದರು. ಸೂರ್ಯಕಾಂತಿ ಕಟಾವಿಗೆ ಬಂದು ಎರಡು ತಿಂಗಳು ಕಳೆದರು ಖರೀದಿ ಕೇಂದ್ರ ತೆರೆಯದ ಹಿನ್ನಲೆ ರಾಜ್ಯ ಅರಿಶಿನ ಬೆಳೆಗಾರರ ಒಕ್ಕೂಟ ಮತ್ತು ಸೂರ್ಯಕಾಂತಿ ಬೆಳೆಗಾರರು ಸರ್ಕಾರ ಹಾಗು ಅಧಿಕಾರಿಗಲ ವಿರುದ್ಧ ಅಸಮಾಧಾನ ಹೊರ ಹಾಕಿದರು. ಅರಿಶಿನ ಬೆಳೆಗಾರರ ಒಕ್ಕೂಟ ನಾಗಾರ್ಜುನ್ ಕುಮಾರ್ ಎಸ್.ಎಂ. ಮಾತನಾಡಿ, ಸೂರ್ಯಕಾಂತಿ ಖರೀದಿ ಕೇಂದ್ರ ತೆರೆಯುವವರೆಗೂ ನಾವು ಧರಣಿ ನಿಲ್ಲಿಸುವುದಿಲ್ಲ. ಸರ್ಕಾರಗಳು ರೈತರ ಜೀವನದ ಜೊತೆ ಚೆಲ್ಲಾಟವಾಡುತ್ತಿದೆ ಎಂದು ಕಿಡಿಕಾರಿದರು.