ಶಿಕ್ಷಕರಿಗೆ ಪುಪ್ಷ ನಮನ ಸಲ್ಲಿಸುವ ಮೂಲಕ ಶಾಲೆಗೆ ಬರಮಾಡಿಕೊಂಡ ಪೊಷಕರು ಶಾಲಾ ಸುಧಾರಣಾ ಸಮೀತಿಯ ಸದಸ್ಯರು ಎಲ್ಲರ ಗಮನ ಸೇಳೆದಿದ್ದಾರೆ. ಸೆಪ್ಟೆಂಬರ್ 6 ರಂದು ಬೆಳಗ್ಗೆ 9-00 ಗಂಟೆಗೆ ಬಹದ್ದೂರ್ ಬಂಡಿ ಗ್ರಾಮದಲ್ಲಿ ಪುಪ್ಷನಮನ ಸಲ್ಲಿಸಿ ಶಿಕ್ಷಕರಿಗೆ ಗೌರವ ಕೊಡುವ ಮೂಲಕ ಬರಮಾಡಿಕೊಂಡ ಪೊಷಕರು ಶಿಕ್ಷಕರ ದಿನಾಚರಣೆ ಕಾರ್ಯಕ್ರಮ ಮಾಡಿದ್ದಾರೆ ಎಂದು ವಿಕಲಚೇತನ ನೌಕರ ಸಂಘದ ರಾಜ್ಯಾಕ್ಷರು ಹಾಗೂ ಮುಖ್ಯ ಗುರು ಬೀರಪ್ಪ ಅಂಡಗಿ ಮಾಹಿತಿ ನೀಡಿದ್ದಾರೆ