ಇತಿಹಾಸ ಮೆಲುಕಲು ಇರುವ ತುಮಕೂರು ನಗರದ ಸ್ವಾತಂತ್ರ್ಯ ಚೌಕದ ವೃತ್ತವು ಜಿಲ್ಲಾಡಳಿತ ಹಾಗೂ ಮಹಾನಗರ ಪಾಲಿಕೆಯ ಸಹಕಾರದಲ್ಲಿ ನವೀಕರಣಗೊಂಡಿದೆ ಎಂದು ಕೆಪಿಸಿಸಿ ಉಪಾಧ್ಯಕ್ಷ ಮುರುಳೀಧರ್ ಹಾಲಪ್ಪ ತಿಳಿಸಿದರು. ಅವರು ತುಮಕೂರು ನಗರದ ಪಾಲಿಕೆ ಆವರಣದಲ್ಲಿ ಶನಿವಾರ ಮಧ್ಯಾಹ್ನ ಸುಮಾರು 12.30 ರ ಸಮಯದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು. ಈ ಸ್ವಾತಂತ್ರ್ಯ ಚೌಕದ ವೃತ್ತವನ್ನ ಮಾರ್ವಾಡಿಗಳು ಬಟ್ಟೆ ವ್ಯಾಪಾರಿಗಳು ಜಾಹೀರಾತು ಫಲಕಗಳನ್ನ ಹಾಕಲು ಬಳಕೆ ಮಾಡುತ್ತಿದ್ದರು. ಇದನ್ನ ಜಿಲ್ಲಾಡಳಿತ ಹಾಗೂ ಮಹಾನಗರ ಪಾಲಿಕೆ ತೆರವು ಮಾಡಿಸಿ ಇತಿಹಾಸಿಕ ವೃತ್ತವನ್ನ ನವೀಕರಣ ಮಾಡಿದೆ ಎಂದರು.