Download Now Banner

This browser does not support the video element.

ದಾವಣಗೆರೆ: ಮಾದಿಹಳ್ಳಿಗೆ ಬಸ್ ಒದಗಿಸಿ: ನಗರದಲ್ಲಿ ಕೆ.ಎಸ್.ಆರ್.ಟಿ.ಸಿಗೆ ವಿದ್ಯಾರ್ಥಿಗಳ ಮನವಿ

Davanagere, Davanagere | Sep 1, 2025
ಹರಪನಹಳ್ಳಿ ತಾಲ್ಲೂಕಿನ ಮಾದಿಹಳ್ಳಿಗೆ ಸಮರ್ಪಕ ಬಸ್ ಒದಗಿಸಲು ಆಗ್ರಹಿಸಿ ಸೋಮವಾರ ಸಂಜೆ 5 ಗಂಟೆಗೆ ದಾವಣಗೆರೆ ನಗರದಲ್ಲಿ ಕೆಎಸ್‌ಆರ್‌ಟಿಸಿಗೆ ಎಐಡಿಎಸ್‌ಓ ಜಿಲ್ಲಾ ಸಮಿತಿಯ ನೇತೃತ್ವದಲ್ಲಿ ವಿದ್ಯಾರ್ಥಿಗಳು ಮನವಿ ಸಲ್ಲಿಸಿದರು. ಮಾದಿಹಳ್ಳಿ ಇಂದ ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ಕಾಲೇಜಿಗೆ ತೆರಳಲು ಸರ್ಕಾರಿ ಬಸ್‌ಗಳ ಮೇಲೆ ಅವಲಂಬಿತರಾಗಿದ್ದಾರೆ. ಬೆಳಿಗ್ಗೆ 6:00ಕ್ಕೆ ಹೊರಡುವ ಬಸ್ಸು ತುಂಬುವ ಕಾರಣ ಬಹುತೇಕ ವಿದ್ಯಾರ್ಥಿಗಳು ಬಸ್ ಹತ್ತಲಾಗದೇ ಕಾಲೇಜಿಗೆ ಹೋಗಲು ತೊಂದರೆಯಾಗುತ್ತಿದೆ. ಸಾರಿಗೆ ವ್ಯವಸ್ಥೆ ಸಮರ್ಪಕವಾಗಿ ಇರದ ಕಾರಣ ಹಲವು ಬಾರಿ ತರಗತಿಗಳಿಗೆ ಹಾಜರಾಗಲು ಕಷ್ಟವನ್ನು ಎದುರಿಸುತ್ತಿದ್ದಾರೆ‌ ಎಂದರು.
Read More News
T & CPrivacy PolicyContact Us