ಯಾದಗಿರಿ ಜಿಲ್ಲೆಯ ಸುರಪುರ ನಗರದ ಅಂಬೇಡ್ಕರ್ ವೃತ್ತದ ಹಿಂಬದಿಯಲ್ಲಿನ ಭೂಮಿ ಮಂಜೂರು ಮಾಡಿಸುವಂತೆ ಡಾ.ಬಿ.ಆರ್ ಅಂಬೇಡ್ಕರ್ ನಿವೇಶನ ಭೂಮಿ ಮಂಜೂರಾತಿ ಹೋರಾಟ ಸಮಿತಿ ಹಾಗೂ ದಲಿತ ಸಂಘಟನೆಗಳ ಒಕ್ಕೂಟದಿಂದ ಯಾದಗಿರಿ ನಗರದ ಪ್ರವಾಸಿ ಮಂದಿರದಲ್ಲಿ ಭಾನುವಾರ ಬೆಳಗ್ಗೆ ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಅವರನ್ನು. ಭೇಟಿ ಮಾಡಿ ಸನ್ಮಾನಿಸಿ ಮನವಿ ಸಲ್ಲಿಸಿ ಒತ್ತಾಯಿಸಿದರು. ಈ ಸಂದರ್ಭದಲ್ಲಿ ಮುಖಂಡರಾದ ಮಾನಪ್ಪ ಕಟ್ಟಿಮನಿ,ವೆಂಕಟೇಶ ಹೊಸಮನಿ, ಶ್ರೀನಿವಾಸ್ ನಾಯಕ ಬೊಮ್ಮನಹಳ್ಳಿ ,ಮಾಳಪ್ಪ ಕಿರದಳ್ಳಿ,ಮಾನಪ್ಪ ಬಿಜಾಸಪುರ,ರಾಹುಲ್ ಹುಲಿಮನಿ, ಶರಣು ಹಸನಾಪುರ ಸೇರಿದಂತೆ ಅನೇಕರು ಭಾಗವಹಿಸಿದ್ದರು.