20 ಅಡಿ ಆಳದ ತೆರದ ಬಾವಿಗೆ ಬಿದ್ದ ಹಸುವನ್ನು ರಕ್ಷಣೆ ಮಾಡಲಾಗಿದೆ. ಶಿವಮೊಗ್ಗ ಜಿಲ್ಲೆ ಹೊಸನಗರ ಪಟ್ಟಣದ ಸಾರ್ವಜನಿಕ ಆಸ್ಪತ್ರೆ ಹಿಂಭಾಗದಲ್ಲಿದ್ದ ಬಾವಿಗೆ ಹಸು ಆಯ ತಪ್ಪಿ ಬಿದ್ದಿತ್ತು. ಬಾವಿಗೆ ಬಿದ್ದ ಹಸುವನ್ನು ಅಗ್ನಿಶಾಮಕದಳ ಸಿಬ್ಬಂದಿ ಶುಕ್ರವಾರ ಸಂಜೆ 5 ಗಂಟೆಗೆ ಕಾರ್ಯಾಚರಣೆ ನಡೆಸಿ ರಕ್ಷಣೆ ಮಾಡಿದ್ದಾರೆ. ಅಗ್ನಿಶಾಮಕ ಸಿಬ್ಬಂದಿಗಳಾದ ಆನಂದಪ್ಪ, ಸುರೇಶ್ ಪಾಟೀಲ್, ಭೀಷ್ಮಾಚಾರಿ ಸೇರಿ ಹಲವರು ಹಸುವನ್ನ ರಕ್ಷಣೆ ಮಾಡಿದ್ದಾರೆ.