ಮಳವಳ್ಳಿ : ಮೇಕೆದಾಟು ಯೋಜನೆಗೆ ತಮಿಳುನಾಡು ಸರ್ಕಾರ ರಾಜಕೀಯ ಉದ್ದೇಶ ದಿಂದ ಅನಗತ್ಯವಾಗಿ ವಿರೋಧ ಮಾಡುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಪಿಸಿದ್ದಾರೆ. ತಾಲೂಕಿನ ಶಿವನಸಮುದ್ರ ಬಳಿ ಏರ್ಪಾಡಾಗಿರುವ ಗಗನಚುಕ್ಕಿ ಜಲಪಾತೋತ್ಸವದ ವೇದಿಕೆ ಸಮಾರಂಭವನ್ನು ಶನಿವಾರ ಸಂಜೆ 9ಗಂಟೆ ಸಮಯದಲ್ಲಿ ಉದ್ಘಾಟಿಸಿ ಮಾತನಾಡಿದ ಅವರು ತಮಿಳು ನಾಡಿಗೆ ಈವರೆಗೆ 98 ಟಿಎಂಸಿ ನೀರು ಹರಿಸಬೇಕಿದ್ದು ಆದರೆ ನಿರಂತರ ಮಳೆ ಕಾರಣ 228 ಟಿಎಂಸಿ ನೀರು ಹರಿದು ಹೋಗಿದೆ ಮೇಕೆದಾಟು ಯೋಜನೆಯಿಂದ 64 ಟಿ ಎಂ ಸಿ ನೀರು ಸಂಗ್ರಹವಾಗಲಿದ್ದು ಇದು ಎರಡು ರಾಜ್ಯಗಳಿಗೂ ಅನುಕೂಲ ವಾಗಲಿದ್ದು ಈ ನಿಟ್ಟಿನಲ್ಲಿ ಕೇಂದ್ರ ಹಾಗೂ ತಮಿಳುನಾಡು ಯೋಜನೆಗೆ ಅವಕಾಶ ಮಾಡಿಕೊಡಬೇಕೆಂದು ಕೋರಿದರು.