ದಾಂಡೇಲಿ : ಪ್ರತಿವರ್ಷದಂತೆ ಈ ವರ್ಷವೂ ಹಳಿಯಾಳ ಪಟ್ಟಣದಲ್ಲಿ ಶ್ರೀ ಶಿವಪ್ರತಿಷ್ಠಾನ ಹಿಂದುಸ್ತಾನ್ ಸಮಿತಿ ಹಾಗೂ ದುರ್ಗಾದೌಡ್ ಸಮಿತಿ ಆಶ್ರಯದಡಿ ಹಮ್ಮಿಕೊಂಡಿದ್ದ13ನೇ ವರ್ಷದ ಶ್ರೀ ದುರ್ಗಾಮಾತಾ ದೌಡ್ ಕಾರ್ಯಕ್ರಮವು ಇಂದು ಮಂಗಳವಾರ ಬೆಳಿಗ್ಗೆ 8:00 ಗಂಟೆ ಸುಮಾರಿಗೆ ಹಳಿಯಾಳ ಪಟ್ಟಣದ ಶ್ರೀ ಗ್ರಾಮದೇವಿ ದೇವಸ್ಥಾನದ ಮುಂಭಾಗದಲ್ಲಿ ಸಂಪನ್ನಗೊಂಡಿತು. ಕಳೆದ ಎಂಟು ದಿನಗಳಿಂದ ಪ್ರತಿದಿನ ಬೆಳಿಗ್ಗೆ ಪಟ್ಟಣದ ಎಲ್ಲ ಕಡೆ ಸಂಚರಿಸಿ, 9ನೇ ದಿನವಾದ ಇಂದು ಮಂಗಳವಾರ ಶ್ರೀ ಗ್ರಾಮದೇವಿ ದೇವಸ್ಥಾನದ ಮುಂಭಾಗದಲ್ಲಿ ಶ್ರೀ ದುರ್ಗಾಮಾತಾ ದೌಡ್ ಕಾರ್ಯಕ್ರಮವು ಸಂಪನ್ನಗೊಂಡಿತು.