ಯಾದಗಿರಿ ಜಿಲ್ಲೆಯ ಬಡಿಗೇರ ತಾಲೂಕಿನ ನಾಲವಡಗಿ ಗ್ರಾಮದಲ್ಲಿ ಮರೆಮ್ಮ ದೇವಸ್ಥಾನದಲ್ಲಿ ಕಳ್ಳತನ ಪ್ರಕರಣ ನಡೆದಿದೆ. ಗುರುವಾರ ರಾತ್ರಿ ವೇಳೆಯಲ್ಲಿ ಘಟನೆ ನಡೆದಿದ್ದು ಶುಕ್ರವಾರ ಬೆಳಗ್ಗೆ ಭಕ್ತರು ದೇವಸ್ಥಾನಕ್ಕೆ ಆಗಮಿಸಿದಾಗ ಕಳ್ಳತನ ನಡೆದಿರುವುದು ಬೆಳಕಿಗೆ ಬಂದಿದೆ. ದೇವಸ್ಥಾನದ ಅರ್ಚಕರು ಬಂದು ನೋಡಿದಾಗ ದೇವಸ್ಥಾನದಲ್ಲಿದ್ದ ಎರಡು ಕೆಜಿ ಬೆಳ್ಳಿ ಹಾಗೂ ಮೂರು ತಾಳಿ ಸರ ಮತ್ತು ಎರಡು ಮುತ್ತುಗಳು ಕಳ್ಳತನ ಆಗಿವೆ ಎಂದು ಹೇಳಲಾಗಿದೆ. ದೇವಸ್ಥಾನಕ್ಕೆ ಯಾವುದೇ ಬಿಗಿ ಭದ್ರತೆ ಇಲ್ಲದೆ ಇರುವುದರಿಂದ ಕಳ್ಳತನ ನಡೆದಿದೆ ಎಂದು ಭಕ್ತರು ಬೇಸರ ವ್ಯಕ್ತಪಡಿಸಿ,ಕಳ್ಳರನ್ನು ಪೊಲೀಸರು ಪತ್ತೆ ಹಚ್ಚಿ ಕಠಿಣ ಶಿಕ್ಷೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.