ರಾಯಚೂರು ಜಿಲ್ಲೆಯ ಲಿಂಗಸೂಗೂರ ತಾಲೂಕಿನ ಹುಸ್ಕಿಹಾಳ ಗ್ರಾಮದ ಗುಡ್ಡದಲ್ಲಿ ಕೋಳಿ ಪಂದ್ಯಾಟ ನಡೆಯುತ್ತಿದ್ದ ಅಡ್ಡೆ ಮೇಲೆ ಲಿಂಗಸುಗೂರ ಪೊಲೀಸ್ರು ದಾಳಿ ಮಾಡಿ 15 ಜನರನ್ನು ವಶಕ್ಕೆ ಪಡೆಯಲಾಗಿದೆ. ಸೋಮವಾರ ಮಧ್ಯಾಹ್ನ ಈ ದಾಳಿ ನಡೆದಿದ್ದು, ಅಕ್ರಮ ಕೋಳಿ ಪಂದ್ಯಾಟದಲ್ಲಿ ತೊಡಗಿಸಿದ 7000 350 ರೂಪಾಯಿ ನಗದು 3 ಕೋಳಿಗಳನ್ನು ವಶಪಡಿಸಿಕೊಳ್ಳಲಾಗಿದೆ. ಲಿಂಗಸುಗೂರು ಠಾಣೆಯ ಪಿಎಸ್ಐ ರಂಗಯ್ಯ ಅವರ ನೇತೃತ್ವದಲ್ಲಿ ದಾಳಿ ನಡೆದಿದ್ದು,ಲಿಂಗಸೂಗೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.