ಗೌರಿ ಗಣೇಶ ಚತುರ್ಥಿ ಪ್ರಯುಕ್ತ ಚಿಕ್ಕಬಳ್ಳಾಪುರ ತಾಲೂಕಿನ ಪೋಶೆಟ್ಟಿಹಳ್ಳಿ ಗ್ರಾಮದಲ್ಲಿ ಸರಿ ಸುಮಾರು 8 ರಿಂದ 10 ಅಡಿಗಳ ವಿನಾಯಕನ ಮೂರ್ತಿಯನ್ನು ಇಟ್ಟು ಹಬ್ಬವನ್ನು ಆಚರಿಸಲಾಯಿತು. ಗಣೇಶನ ಮೂರ್ತಿಗೆ ವಿವಿಧ ಕುಸುಮಗಳಿಂದ ಹಾಗೂ ವಿದ್ಯುತ್ ದೀಪಗಳಿಂದ ಅಲಂಕರಿಸಿ, ಗಣೇಶನಿಗೆ ಇಷ್ಟವಾದ ಪದಾರ್ಥಗಳನ್ನು ಅರ್ಪಿಸಿ, ಮಹಾಮಗಳಾರತಿ ಸೇರಿದಂತೆ ವಿಶೇಷ ಪೂಜೆಗಳನ್ನು ನೆರವೇರಿಸಲಾಯಿತು. ಈ ವೇಳೆ ಗ್ರಾಮದ ಭಕ್ತಾದಿಗಳಲ್ಲ ಆಗಮಿಸಿ ಮಂಗಳಾರತಿ ತೆಗೆದುಕೊಂಡು ತಮ್ಮ ತಮ್ಮ ಇಷ್ಟಾರ್ಥಗಳನ್ನು ಬೇಡಿಕೊಂಡು ತೀರ್ಥ ಅಭಿಷೇಕದ ಜೊತೆಗೆ ವಿನಾಯಕನ ಕೃಪೆಗೆ ಪಾತ್ರರಾದರು.