ಚಿತ್ರದುರ್ಗ ನಗರಕ್ಕೆ ವಿವಿ ಸಾಗರದಿಂದ ಪೂರೈಕೆಯಾಗುವ ಕುಡಿಯುವ ನೀರಿನ ಪೈಪ್ ಲೈನ್ ಹೊಡೆದು ಶುದ್ದ ಕುಡಿಯುವ ನೀರು ಪೋಲಾಗುತ್ತಿದೆ. ಇದರಿಂದ ನಗರದ ಜನಸಾಮಾನ್ಯರಲ್ಲಿ ಆತಂಕಕ್ಕೆ ಕಾರಣವಾಗಿದೆ. ಪೈಪ್ ಲೈನ್ ಹೊಡೆದಿರುವ ಕಾರಣದಿಂದ ಕಲುಷಿತ ನೀರು ಕುಡಿಯುವ ನೀರಿನ ಜೊತೆ ಪೂರೈಕೆ ಯಾಗುತ್ತಿರುವ ಆತಂಖ ಕೂಡಾ ಜನರಲ್ಲಿ ಮೂಡಿದೆ. ಕವಾಡಿಗರಹಟ್ಟಿಯಲ್ಲಿ ನಡೆದ ದುರಂತ ಪ್ರಕರಣ ಮಾಸುವ ಮುನ್ನವೇ ಇಂಥದೊಂದು ಪೈಪ್ ಲೈನ್ ಹೊಡೆದು ನೀರು ಕಲುಷಿತವಾಗುತ್ತಿದ್ದು, ನಿಜಕ್ಕೂ ನಗರದ ಜನರಲ್ಲಿ ಭಯ ಹುಟ್ಟಿಸಿದೆ. ಇನ್ನೂ ನಗರಕ್ಕೆ ಪೂರೈಕೆ ಆಗುವ ನೀರನ್ನ ಕುಡಿಯಲು ಕೂಡಾ ಜನರು ಆತಂಕ ಪಡುವ ಸ್ಥಿತಿ ನಿರ್ಮಾಣವಾಗಿದೆ. ಇದರಿಂದ ಕೂಡಲೇ ನಗರಸಭೆ ಇಂಜಿನಿಯರ್ ಗಳು ಹಾಗೂ ಕಮಿಷನರ್ ಕೂಡಾ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿ ಎಂದರು