ಧರ್ಮಸ್ಥಳ ಪ್ರಕರಣವನ್ನು ಬೇಕಿದ್ದರೆ ಸಿಬಿಐಗೆ ಕೊಡಲಿ ನಮ್ಮದೇನು ಅಭ್ಯಂತರವಿಲ್ಲ ಆದರೆ ಬಿಜೆಪಿಯವರು ನ್ಯಾಯಾಲಯ ಎಸ್ಐಟಿ ರಚನೆ ಮಾಡುವಂತೆ ತಿಳಿಸಿದ್ದರಿಂದ ರಚನೆ ಮಾಡಿದ್ದೇವೆ ಅವಾಗ ಬಿಜೆಪಿಯವರು ಯಾಕೆ ಬಾಯಿ ಮುಚ್ಚಿ ಕುಳಿತುಕೊಂಡಿದ್ದರು ಎಂದು ಯಾದಗಿರಿ ನಗರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ಗೌಡ ದರ್ಶನಾಪುರ ಬಿಜೆಪಿಯ ವಿರುದ್ಧ ವಾಗ್ದಾಳಿ ನಡೆಸಿದರು. ದಲಿತ ಮುಖ್ಯಮಂತ್ರಿ ಕುರಿತು ಮಾತನಾಡಿ ಕಾಂಗ್ರೆಸ್ ಪಕ್ಷ ಅದನ್ನು ಮಾಡಬಹುದು ಬಿಜೆಪಿಯವರು ಮಾಡುತ್ತಾರೆ ಎಂದು ಪ್ರಶ್ನಿಸಿದರು. ಈ ಸಂದರ್ಭದಲ್ಲಿ ಯಾದಗಿರಿಯ ಶಾಸಕ ಚನ್ನಾರಡ್ಡಿ ಪಾಟೀಲ್ ತುನ್ನೂರ ಉಪಸ್ಥಿತರಿದ್ದರು.