ಜಿಲ್ಲೆಯಲ್ಲಿ ಇ-ಪೌತಿ ಆಂದೋಲನ ಪ್ರಾರಂಭ : ಸದುಪಯೋಗಕ್ಕೆ ಮನವಿ ************** ಚಿತ್ರದುರ್ಗ.ಆಗಸ್ಟ್.30: ಜಿಲ್ಲೆಯಲ್ಲಿ ಕಳೆದ ಒಂದು ತಿಂಗಳಿನಿಂದ ಇ-ಪೌತಿ ಆಂದೋಲನ ಪ್ರಾರಂಭಿಸಿದ್ದು, ಸಂಬಂಧಿಸಿದ ಜಮೀನಿನ ಪೌತಿ ವಾರಸುದಾರರು ಕನಿಷ್ಟ ದಾಖಲೆಗಳನ್ನು ಸಂಬಂಧಿಸಿದ ಗ್ರಾಮ ಆಡಳಿತ ಅಧಿಕಾರಿಗೆ ನೀಡಿ, ಈ ಯೋಜನೆಯ ಸದುಪಯೋಗ ಪಡೆದುಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ತಿಳಿಸಿದ್ದಾರೆ. 2025-26ನೇ ಸಾಲಿನ ಆಯವ್ಯಯ ಭಾಷಣ ಕಂಡಿಕೆ 418 ರಲ್ಲಿ ಪಹಣಿಗಳಿಗೆ ಆಧಾರ್ ಜೋಡಣೆ ಸಂದರ್ಭದಲ್ಲಿ ಪೌತಿ ಎಂದು ಗುರುತಿಸಲಾದ ಜಮೀನುಗಳ ಪಹಣಿಗಳನ್ನು ನೀಡಬೇಕು.