ತೆಂಕುಪೇಟೆಯ ವಸತಿ ನಿಲಯದ ಫ್ಲಾಟ್ ಒಂದರಲ್ಲಿ ಪ್ರಜ್ಞೆ ಇಲ್ಲದೆ ಚಿಂತಾ ಜನಕ ಸ್ಥಿತಿಯಲ್ಲಿದ್ದ ಮಹಿಳೆಯೋರ್ವರನ್ನು ವಿಶು ಶೆಟ್ಟಿ ರಕ್ಷಿಸಿ ಜಿಲ್ಲಾಸ್ಪತ್ರೆಗೆ ದಾಖಲಿಸಿದ ಘಟನೆ ನಡೆದಿದೆ. ಮಹಿಳೆ ಶರ್ವಾಣಿ (37ವ) ಫ್ಲ್ಯಾಟ್ ಒಂದರಲ್ಲಿ ಕಳೆದ ಒಂದು ವರ್ಷದಿಂದ ಕೆಲಸಕ್ಕೆ ಸೇರಿದ್ದರು. ಕಳೆದ 15 ದಿನಗಳಿಂದ ಮಹಿಳೆ ಒಂಟಿಯಾಗಿ ಜೀವಿಸುತ್ತಿದ್ದು ಫ್ಲಾಟ್ ಮಾಲೀಕ ಬೆಂಗಳೂರಿಗೆ ತೆರಳಿದ್ದರು. ಇಂದು ಹಿರಿಯ ನಾಗರಿಕರಾದ ಮಾಲೀಕ ಬಂದಾಗ ಮಹಿಳೆ ಪ್ರಜ್ಞಾಹೀನ ಸ್ಥಿತಿ ನೋಡಿ ವಿಶು ಶೆಟ್ಟಿಗೆ ಮಾಹಿತಿ ನೀಡಿದರು.