ಬಸವಕಲ್ಯಾಣ: ವೇಗವಾಗಿ ಚಲಿಸುತ್ತಿದ್ದ ಬೈಕ್'ಗೆ ಹಾಲಿನ ವಾಹನ ಡಿಕ್ಕಿಯಾಗಿ ಇಬ್ಬರು ಮಹಿಳೆಯರು ಸ್ಥಳದಲ್ಲೆ ಮೃತಪಟ್ಟ ಘಟನೆ ತಾಲೂಕಿನ ಉಮ್ಮಾಪೂರ ಗ್ರಾಮದ ಬಳಿ ಜರುಗಿದೆ. ತಾಲೂಕಿನ ಭೋಸ್ಗಾ ಗ್ರಾಮದ ನಿವಾಸಿಗಳಾದ ತುಕ್ಕಾಬಾಯಿ ಕಿಶನ ಜಾಧವ (55) ಮಗಳು ಸುರೇಖಾ ಗುಂಡಪ್ಪ ಮಾನೆ ಮೃತ ದುರ್ದೈವಿಗಳಾಗಿದ್ದಾರೆ. ಸುದ್ದಿ ತಿಳಿದ ಬಸವಕಲ್ಯಾಣ ಗ್ರಾಮೀಣ ಠಾಣೆ ಪೊಲೀಸರ ತಂಡ ಸ್ಥಳಕ್ಕೆ ಭೇಟಿನೀಡಿ ಪರಿಶೀಲಿಸಿದ್ದು, ತನಿಖೆ ಮುಂದುವರೆದಿದೆ