ಪಾವಗಡ ತಾಲ್ಲೂಕಿನ ದವಡೆಬೆಟ್ಟ ಗ್ರಾಮದಲ್ಲಿ ವಕೀಲ ಸುಧಾಕರ್ ಮೇಲೆ ನಡೆದ ಹಲ್ಲೆ ಖಂಡಿಸಿ ತುಮಕೂರಿನಲ್ಲಿ ವಕೀಲರ ಸಂಘದಿಂದ ಪ್ರತಿಭಟನೆ ನಡೆಸಲಾಯಿತು. ನಗರದ ವಕೀಲ ಸಂಘದ ಕಚೇರಿಯಿಂದ ಜಿಲ್ಲಾಧಿಕಾರಿ ಕಚೇರಿವರೆಗೂ ಮೆರವಣಿಗೆ ನಡೆಸಿದ ವಕೀಲರು, ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಸೋಮವಾರ ಮಧ್ಯಾಹ್ನ 1 ರ ಸಮಯದಲ್ಲಿ ಪ್ರತಿಭಟನೆ ನಡೆಸಿದರು. ಬಳಿಕ ಉಪ ತಹಸೀಲ್ದಾರ್ ಕಮಲಮ್ಮ ಅವರ ಮೂಲಕ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಿ ವಕೀಲರ ರಕ್ಷಣೆ ಕಾಯ್ದೆಯನ್ನ ಬಲಪಡಿಸುವಂತೆ ಆಗ್ರಿಹಿಸಿದರು.ಕಕ್ಷಿದಾರನ ಪರವಾಗಿ ವಕೀಲ ಸುಧಾಕರ್ ನೋಟೀಸ್ ಜಾರಿ ಮಾಡಿದ್ದರು ನೋಟೀಸ್ ಪಡೆದ ವ್ಯಕ್ತಿ ಕೋಪಗೊಂಡು ಹಲ್ಲೆ ಮಾಡಿರುವುದು ಸರಿಯಲ್ಲ ಎಂದು ದೂರಿದರು.