ಚಿತ್ರದುರ್ಗ ಹಿಂದೂ ಮಹಾಗಣಪತಿ ಸಮಿತಿಯಿಂದ ಗುರುವಾರ ಮಧ್ಯಾಹ್ನ 1 ಗಂಟೆಗೆ ಸುದ್ದಿಗೋಷ್ಠಿ ನಡೆಸಿದರು. ಈ ವೇಳೆ ಮಾತ್ನಾಡಿದ ಸಂಘಟನಾ ಪ್ರಮುಖರಾದ ಪ್ರಭಂಜನ್ ಮಾತ್ನಾಡಿ ಅಧಿಕಾರಿಗಳು ಹಾಗೂ ಸರ್ಕಾರ ಗಣೇಶೋತ್ಸವ, ದೀಪಾವಳಿ ಬಂದಾಗ ಮಾತ್ರ ನಿರ್ಬಂಧಗಳನ್ನ ಹೇರುತ್ತಾರೆ. ಆದರೆ ಮಸಿದಿಯಲ್ಲಿ ನಮಾಜ್ ಮಾಡುವಾಗ ಇಷ್ಟು ಡಿಸಿಬಲ್ ಎಂಬ ಸುಪ್ರೀಂ ಕೋರ್ಟ್ ನಿಬಂಧನೆ ಇದೆ ಆದರೂ ಪಾಲಿಸಲ್ಲ ಎಂದರು. ಡಿಜೆ ನಿಷೇಧ ಎನ್ನುವವರು ಎಷ್ಟು ಬಾರಿ ಈ ಬಗ್ಗೆ ಪ್ರೇಸ್ ಮೀಟ್ ಮಾಡಿದ್ದೀರಿ, ಗೋ ಹತ್ಯೆ ನಿಷೇಧ ಇದೆ, ಈ ಬಗ್ಗೆ ಅಧಿಕಾರಿಗಳು ಕ್ರಮ ವಹಿಸಿದ್ದಾರ ಎಂದು ಪ್ರಶ್ನಿಸಿದರು. ಇಲ್ಲ ಸಲ್ಲದ ನಿರ್ಬಂಧಗಳು ಡಿಜೆ ಬಳಕೆಗೆ ಯಾಕೆ, ಹಿಂದೂ ಮಹಾಗಣಪತಿ ಯಾತ್ರೆ ಶೋಕ ಯಾತ್ರೆ ಅಲ್ಲ, ಇದು ಶೋಭಯಾತ್ರೆ ಎಂದರು.