ಪಟ್ಟಣದಲ್ಲಿ 12 ಮತ್ತು 13ನೇ ವಾರ್ಡಿನಲ್ಲಿ ಗೌರಿ ಗಣೇಶ ಹಬ್ಬದ ದಿನ ಗಣೇಶ ಮೂರ್ತಿಯ ಪ್ರತಿಷ್ಟಾಪನೆ ಮಾಡಲಾಗಿತ್ತು. ನಿರಂತರವಾಗಿ ಐದು ದಿನಗಳ ಪೂಜೆ ಸಲ್ಲಿಸಿ ನಂತರ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ತಮಟೆ ವಾದ್ಯಗಳ ಮೂಲಕ ಮೆರವಣಿಗೆ ನಡೆಸಲಾಯಿತು. ಇದೇ ವೇಳೆ ಎರಡೂ ವಾರ್ಡುಗಳ ನಾಗರೀಕರು ನಾನಾ ರೀತಿಯ ಮನರಂಜನಾ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು. ಪುಷ್ಪ-2 ಛದ್ಮ ವೇಷ ಧರಿಸಿದ ದಸಂಸ ತಾಲೂಕು ಅಧ್ಯಕ್ಷ ವಿಜಯ್ ರವರು ಪಟ್ಟಣದುದ್ದಕ್ಕೂ ನೃತ್ಯ ಮಾಡಿ ನೆರೆದಿದ್ದವರನ್ನು ರಂಜಿಸಿದರು.