11ನೇ ದಿನದ ಗಣೇಶ ವಿಸರ್ಜನೆ ಮೆರವಣಿಗೆಯಲ್ಲಿ ಭಾಗಿಯಾದ ಹಿಂದುಗಳಿಗೆ ಮತ್ತು ಗಣೇಶನ ಭಕ್ತರಿಗೆ ಮುಸ್ಲಿಂ ಸಮಾಜದವರಿಂದ ಪ್ರಸಾದ ಸೇವೆ ಮಾಡಲಾಗಿತ್ತು. ಕೊಪ್ಪಳ ನಗರ ಸಭೆಯ ಅಧ್ಯಕ್ಷ ಅಮ್ಜದ್ ಪಟೇಲ್ ಅವರು ಪ್ರಸಾದ ವಿತರಣೆ ಮಾಡುವ ಮೂಲಕ ಚಾಲನೆ ನೀಡಿದರು. ಸೆಪ್ಟೆಂಬರ್ 07 ರಂದು ಮಧ್ಯಾಹ್ನ ರಾತ್ರಿ 12-30 ಗಂಟೆಗೆ ಪ್ರಸಾದ ಆರಂಭ ಮಾಡಿದ್ದು ಮಧ್ಯಾಹ್ನ ರಾತ್ರಿ 2-30 ಗಂಟೆಗೆಯ ವರಿಗೆ ಪ್ರಸಾದ ನಡೆಯಿತು. ಕೊಪ್ಪಳ ನಗರ ಬ್ಲಾಕ್ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಎಂ.ಕಾಟನ್ ಪಾಷಾ ನಗರ ಸಭೆಯ ಸದಸ್ಯ ಅಕ್ಬರ್ ಪಾಷಾ ಪಲ್ಟೀನ ಮತ್ತು ಮುಸ್ಲಿಂ ಸಮಾಜದ ಮುಖಂಡರು ಹಾಗೂ ಮಾಜಿ ನಗರ ಸಭೆಯ ಸದಸ್ಯ ಮನ್ವಿಪಾಷಾ ಸೇರಿದಂತೆ ಹಲವರು ಉಪಸ್ಥಿತರಿದ್ದರು