ಕೊಪ್ಪಳ ನಗರದ ಖಾಸಗಿ ಬಟ್ಟೆ ಅಂಗಡಿಯೊಂದರ ಓಪನಿಂಗ್ ಆಫರ್ ನಲ್ಲಿ ಭರ್ಜರಿ ಖರೀದಿಗಾಗಿ ಜನರು ಮುಗಿಬಿದ್ದಿರುವ ಘಟನೆ ಕೊಪ್ಪಳ ನಗರದ ಲಾಲ್ ಬಹುದೂರ್ ಶಾಸ್ತ್ರಿ ಸರ್ಕಲ್ ನಲ್ಲಿ ನಡೆದಿದೆ. ಲಾಲ್ ಬಹದ್ದೂರ್ ಶಾಸ್ತ್ರಿ ನಗರದಲ್ಲಿ ಹೊಸದಾಗಿ ಓಪನ್ ಆಗಿರುವ ಬಟ್ಟೆ ಅಂಗಡಿಯೊಂದರಲ್ಲಿ ಆಫರ್ ಇಟ್ಟಿರುವ ಹಿನ್ನೆಲೆ ಸಾವಿರ ಜನ ಯುವಕ ಯುವತಿಯರು ಬಟ್ಟೆ ಖರೀದಿಗಾಗಿ ಮುಗಿಬಿದ್ದಿದ್ದಾರೆ. ಅಂಗಡಿಯ ಮಾಲೀಕರು ಹಾಗೂ ಪೊಲೀಸರು ಹರಸಾಹಸ ಪಟ್ಟಿದ್ದಾರೆ.