ಯಾವನೋ ಘಜ್ನಿ, ಗೋರಿ ಅಕ್ಬರ್, ಹುಮಾಯೂನ್, ಬಾಬರ್ ಬಂದಿದ್ದ ಅಂತ ಹೇಳಬೇಡಿ, ಬಾಬರ್ ಇಲ್ಲದೆ ಇದ್ದರೂ ಭಾನು ಮುಷ್ತಾಕ್ ಅಂತವರು ನಮ್ಮ ನಡುವೆ ಇದ್ದಾರೆ. ಅದಕ್ಕಾಗಿ ಎಚ್ಚರಿಕೆ ನೀಡಲು ನಾನು ಬಂದಿದ್ದೇನೆ ಹಿಂದೂಗಳು ಜಾತಿಯನ್ನ ಬಿಟ್ಟು ಒಂದಾಗಬೇಕು ದೇಶವನ್ನು ಉಳಿಸಿಕೊಳ್ಳಲು ಹಿಂದೂಗಳು ಜಾತಿಯನ್ನ ಬಿಟ್ಟು ಒಂದಾಗಬೇಕು ಎಂದು ಮಾಜಿ ಸಂಸದ ಪ್ರತಾಪ ಸಿಂಹ ತರೀಕೆರೆ ಪಟ್ಟಣದಲ್ಲಿ ನಡೆದ ಹಿಂದೂ ಮಹಾಸಭಾ ಗಣಪತಿ ವಿಸರ್ಜನಾ ಮೆರವಣಿಗೆಯಲ್ಲಿ ಹಿಂದೂಗಳಿಗೆ ಎಚ್ಚರಿಕೆಯನ್ನು ಕೊಟ್ಟರು.