ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕು ಕೇಂದ್ರದಲ್ಲಿ ಪ್ರಜಾಸೌಧ ನಿರ್ಮಾಣಕ್ಕೆ ಉದ್ದೇಶಿಸಲಾಗಿರುವ ಜಮೀನನ್ನು ಚಾಮರಾಜನಗರ ಜಿಲ್ಲಾಧಿಕಾರಿ ಡಾ. ಸಿ.ಟಿ. ಶಿಲ್ಪನಾಗ್ ಅವರು ಮಂಗಳವಾರ ಬೆಳ್ಳಿಗ್ಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿ ತಾಲೂಕು ಮಟ್ಟದ ಎಲ್ಲಾ ಇಲಾಖೆಗಳ ಕಾರ್ಯಾಲಯಗಳನ್ನು ಒಟ್ಟಿಗೆ ಹೊಂದಿರುವ ಪ್ರಜಾಸೌಧ ನಿರ್ಮಾಣ ಯೋಜನೆ ಹನೂರು ಜನತೆಗೆ ಒದಗಿಸಲು ಸಹಕಾರಿ ಆಗಲಿದೆ. ಈಗಾಗಲೇ ಗುರುತಿಸಿರುವ ಈ ಜಾಗವು ಆಧುನಿಕ ಕಟ್ಟಡ ನಿರ್ಮಾಣಕ್ಕೆ ಸೂಕ್ತವಿದ್ದು, ಸರಕಾರದಿಂದ ಈಗಾಗಲೇ ಅನುಮೊದನೆ ದೊರಕಿದ್ದು ಶೀಘ್ರದಲ್ಲೇ ಯೋಜನೆ ರೂಪಿಸಿ ನಿರ್ಮಾಣ ಕಾರ್ಯ ಆರಂಭಿಸಲಾಗುತ್ತದೆ” ಎಂದು ತಿಳಿಸಿದ್ದಾರೆ.