ತೀರ್ಥಹಳ್ಳಿ ತಾಲೂಕಿನ ಆಗುಂಬೆಯ ಶ್ರೀರಾಮಮಂದಿರ ದೇವಸ್ಥಾನದಲ್ಲಿ ಕಳ್ಳತನ ಮಾಡಿದ್ದ ಆರೋಪಿಯನ್ನ ಪೊಲೀಸರು ಬಂಧಿಸಿದ್ದಾರೆ.ಸೆಪ್ಟೆಂಬರ್ 8ರ ರಾತ್ರಿ ದೇವಸ್ಥಾನದ ಬಾಗಿಲು ಒಡೆದು ಶ್ರೀರಾಮದೇವರ ವಿಗ್ರಹ,ದೇವರ ಕೈಯಲ್ಲಿದ್ದ ಬಿಲ್ಲು, ಕಾಣಿಕೆಹುಂಡಿಯಲ್ಲಿದ್ದ ಹಣವನ್ನ ಕಳ್ಳತನ ಮಾಡಲಾಗಿತ್ತು.ಈ ಸಂಬಂಧ ಆಗುಂಬೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ಕೂಡ ದಾಖಲಾಗಿತ್ತು. ಈ ಪ್ರಕರಣದ ತನಿಖೆ ನಡೆಸಿದ ಪೊಲೀಸರು ಸಂಕದಹೊಳೆ ನಿವಾಸಿಯಾದ ಮನೋಜ್ ಅಲಿಯಾಸ್ ಗುಂಡ ಎಂಬಾತ ನನ್ನ ಬಂಧಿಸಿದ್ದು, ಬಂಧಿತನ ಬಳಿ ಕಳುವಾದ ವಸ್ತುಗಳನ್ನ ವಶಕ್ಕೆ ಪಡೆಯಲಾಗಿದೆ. ಕುರಿತಾದ ಮಾಹಿತಿ ಮಂಗಳವಾರ ಲಭ್ಯವಾಗಿದೆ.