ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ದೇವಪುರ ಗ್ರಾಮದ ರಾಷ್ಟ್ರಮಟ್ಟದ ಬಿಲ್ ಕ್ರೀಡಾಪಟುಗಳು ಹಾಗೂ ಸಾರ್ವಜನಿಕರಿಗೆ ಸಂಚಾರಿ ನಿಯಮಗಳ ಪಾಲಿಸುವ ಕುರಿತು ಜಾಗೃತಿ ಕಾರ್ಯಕ್ರಮ ನಡೆಯಿತು. ಗುರುವಾರ ಸಂಜೆ ನಡೆದ ಜಾಗೃತಿ ಕಾರ್ಯಕ್ರಮದಲ್ಲಿ ಸುರಪುರ ಠಾಣೆಯ ಪೊಲೀಸ್ ಪೇದೆ, ದಯಾನಂದ ಜಮಾದಾರ ಭಾಗವಹಿಸಿ ಎಲ್ಲರಿಗೂ ಹೆಲ್ಮೆಟ್ ಹಾಗೂ ಮೈಸೂರು ದಸರಾ ಕ್ರೀಡಾಕೂಟದಲ್ಲಿ ಭಾಗವಹಿಸಲು ಈ ತಂಡ ತೆರಳುತ್ತಿರುವ ಸಂದರ್ಭದಲ್ಲಿ ಸಮವಸ್ತ್ರಗಳನ್ನು ನೀಡಿ ಕ್ರೀಡಾಕೂಟದಲ್ಲಿ ಜಯಗಳಿಸಲು ತಿಳಿಸಿ ಹೆಲ್ಮೆಟ್ ಅನ್ನು ನೀಡಿ ಕಡ್ಡಾಯವಾಗಿ ಸಂಚಾರಿ ನಿಯಮಗಳನ್ನು ಪಾಲಿಸುವಂತೆ ಇತರೆ ಜನರಿಗೂ ಕೂಡ ತಿಳಿಸುವಂತೆ ಮನವಿ ಮಾಡಿದರು.