Download Now Banner

This browser does not support the video element.

ಕಲಬುರಗಿ: 2022 ರಲ್ಲಿ ಗಿರೀಶ್ ಕಂಬಾನುರ್ ಹತ್ಯೆ ಕೆಸ್‌ನಲ್ಲಿ ರೌಡಿಶೀಟರ್ ಶಂಕರ್ ಅಳ್ಳೋಳ್ಳಿ ಭಾಗಿ: ನಗರದಲ್ಲಿ ಎಸ್ಪಿ ಶ್ರೀನಿವಾಸುಲು

Kalaburagi, Kalaburagi | Sep 12, 2025
ಕಲಬುರಗಿ : ಕಲಬುರಗಿ ಜಿಲ್ಲೆ ಶಹಬಾದ್ ತಾಲೂಕಿನ ಭಂಕೂರು ಕ್ರಾಸ್ ಬಳಿ ರೌಡಿಶೀಟರ್ ಶಂಕರ್ ಅಳ್ಳೋಳ್ಳಿ ಮೇಲೆ ಮಾರಕಾಸ್ತ್ರಗಳಿಂದ ದಾಳಿ ಮಾಡಿ ಹತ್ಯೆಗೆ ಯತ್ನಿಸಿದ್ದ ಘಟನೆಗೆ ಸಂಬಂಧಿಸಿದಂತೆ, ದಾಳಿಕೋರರ ಬಂಧನಕ್ಕೆ ಬಲೆ ಬೀಸಲಾಗಿದೆಯೆಂದು ಎಸ್ಪಿ ಅಡ್ಡೂರು ಶ್ರೀನಿವಾಸುಲು ಹೇಳಿದ್ದಾರೆ.. ಸೆ12 ರಂದು ಮಧ್ಯಾನ 1 ಗಂಟೆಗೆ ನಗರದಲ್ಲಿ ಮಾತನಾಡಿದ ಅವರು, 2022 ರ ಜೂನ್ ತಿಂಗಳಲ್ಲಿ ನಗರಸಭೆ ಸದಸ್ಯ ಗಿರೀಶ್ ಕಂಬಾನುರ್ ಹತ್ಯೆ ಪ್ರಕರಣದಲ್ಲಿ ರೌಡಿಶೀಟರ್ ಶಂಕರ್ ಅಳ್ಳೋಳ್ಳಿ ಭಾಗಿಯಾಗಿದ್ದ.. ಅಷ್ಟೇ ಅಲ್ಲದೇ ಆತನ ವಿರುದ್ಧ ಮೂರ್ನಾಲ್ಕು ಪ್ರಕರಣಗಳು ದಾಖಲಾಗಿದ್ದವೆಂದು ಎಸ್ಪಿ ಅಡ್ಡೂರು ಶ್ರೀನಿವಾಸುಲು ಹೇಳಿದ್ದಾರೆ ‌
Read More News
T & CPrivacy PolicyContact Us