ದಾಂಡೇಲಿ : ನಗರದಲ್ಲಿ ಎಲ್ಲೆಡೆ ಚೌತಿ ಸಂಭ್ರಮ ಮನೆ ಮಾಡಿದೆ. ನಗರದ ಪ್ರಮುಖ ರಸ್ತೆಗಳ ಹತ್ತಿರ, ವೃತ್ತಗಳ ಹತ್ತಿರ ಗಲ್ಲಿ ಗಲ್ಲಿಗಳಲ್ಲಿ ಸಾರ್ವಜನಿಕ ಗಣೇಶೋತ್ಸವ ಆರಂಭವಾಗಿದೆ. ಅಂದ ಹಾಗೆ ದಾಂಡೇಲಿಯಿಂದ ಬೆಂಗಳೂರಿಗೆ ರಾತ್ರಿ ಹೊರಡುವ ಖಾಸಗಿ ಬಸ್'ಗಳು ಹಗಲೊತ್ತಿನಲ್ಲಿ ಅಂದ ಹಾಗೆ ಜೆ.ಎನ್.ರಸ್ತೆಯಿಂದ ಅಂಚೆ ಕಚೇರಿಗೆ ಹೋಗುವ ರಸ್ತೆಯ ಬದಿಯಲ್ಲಿ ಪಾರ್ಕಿಂಗ್ ಮಾಡುತ್ತಿತ್ತು. ಆದರೆ ಆ ಸ್ಥಳದಲ್ಲಿ ನಗರದ ಪ್ರಮುಖ ಗಣಪತಿ ಮಂಡಲವಾದ ಜೆಏನ್ ರಸ್ತೆ ಸಾರ್ವಜನಿಕ ಗಣೇಶೋತ್ಸವ ಸಮಿತಿಯಿಂದ ಸಾರ್ವಜನಿಕ ಗಣೇಶೋತ್ಸವ ಕಾರ್ಯಕ್ರಮ ಆಯೋಜನೆಗೊಂಡಿರುವುದರಿಂದ, ಈ ಖಾಸಗಿ ಬಸ್ಸುಗಳಿಗೆ ಅಲ್ಲಿ ಪಾರ್ಕಿಂಗ್ ಮಾಡಲು ಅವಕಾಶ ಇರುವುದಿಲ್ಲ.